ನಾವು ತಂಡವಾಗಿ, ಯಾವಾಗಲೂ ನಿಮಗೆ ಸಹಾಯ ಮಾಡಬಹುದು ಮತ್ತು CSP ಪಾಯಿಂಟ್ ಪಡೆಯುವಲ್ಲಿ ಕೈ ಹಿಡಿಯಬಹುದು. ಆದರೆ, ಅದೇ ಸಮಯದಲ್ಲಿ ನಿಮ್ಮ ನಿರ್ಧಾರ ಸಹ ಧೃಡವಿರಬೇಕು ಮತ್ತು ಸಾಧನೆಯ ಹಸಿವಿರಬೇಕು.
CSP ಪಾಯಿಂಟ್ ಪಡೆಯುವಲ್ಲಿ ಒಬ್ಬ ವ್ಯಕ್ತಿಯ ಅರ್ಹತೆಯನ್ನು ವ್ಯಾಖ್ಯಾನಿಸುವ ಅಂಕಗಳನ್ನು ಪಕ್ಕದಲ್ಲಿ ನೀಡಲಾಗಿದೆ:
ಮೊದಲನೆಯದಾಗಿ,
ಕನಿಷ್ಠ ಶಿಕ್ಷಣ ಅರ್ಹತೆಯು PUC ಅಥವಾ ಜಾಸ್ತಿ ಇರಬೇಕು. ಹಾಗೂ ಲ್ಯಾಪ್‌ಟಾಪ್ ಮತ್ತು ಡೆಸ್ಕ್‌ಟಾಪ್ ಬಳಸುವ ವಿಷಯದಲ್ಲಿ ಸ್ವಲ್ಪ ಅನುಭವವಿರಬೇಕು.
ಎರಡನೆಯದಾಗಿ,
ಬ್ಯಾಂಕ್ ನಿಂದ ಅನುಮತಿ, ಶಾಪ್, ಬ್ರ್ಯಾಂಡಿಂಗ್ ಮೆಟೀರಿಯಲ್, ಪಾಸ್ ಬುಕ್ ಪ್ರಿಂಟರ್ ಇನ್ನಿತರೆಗಳಿಗೆ 2 ಲಕ್ಷಕ್ಕಿಂತ ಹೆಚ್ಚು ಅಥವಾ ಕಡಿಮೆ ಹೂಡಿಕೆಯನ್ನು ಹೊಂದಿರಬೇಕು.
ಕೊನೆಯದಾಗಿ,
ಯಾವುದೇ ಹಿಂದಿನ ಕ್ರಿಮಿನಲ್ ದಾಖಲೆಗಳು ಅಥವಾ ಮರುಪಾವತಿಸದ ಸಾಲಗಳು ಇರಬಾರದು.